Wednesday, 13 November 2013

ಜೀವನ್ಮೊಹ

ಬರದ ಬವಣೆಯಲ್ಲೂ ಭಾವನೆಗಳ ಕೊರತೆ ಇಲ್ಲ,
ಇಂದು ನಾಳೆಗಳ, ಹುಟ್ಟು-ಸಾವುಗಳ ಬದುಕು.
ಆಸೆಗಳ ಆಗಸಕೆ ಏಣಿ ಇಡುವ ಪ್ರಯತ್ನ.
ನೀಗದ ಹಸಿವಿಗೆ ಉಣಬಡಿಸುವ ಆಡಂಬರ.

ತೋದಲ್ ನುಡಿ ಮೊದಲ್ ನಡೆ
ತುಂಟ ಮನ, ಬಿಸಿಯ ತನು.
ಕಣ್ ಹನಿ, ಕಿರು ನಗೆ
ತುಂಬಿದ ಬಸಿರು, ಮೆಲ್ಲ ನಿಟ್ಟುಸಿರು.
ನೆನಪುಗಳ ಸಂತೆಯ ಕರೆತರುವ ನೆಪಗಳು.

ಈ ನಶೆಯ ಉಯ್ಯಾಲೆಯಲಿ ತೇಲದವರಾರು?
ಕಾಲನಾ ಚಕ್ರದಲಿ ಉರುಳದವರಾರು?
ಸೃಷ್ಟಿಯಾ ಚಿತ್ರದಲಿ ಬಣ್ಣವಾಗದವರಾರು?

No comments:

Post a Comment