ಪ್ರೀತಿಯ ಹಕ್ಕಿ, ಮನದಲಿ ಗೂಡೊಂದನು ಕಟ್ಟಿ,
ಅಭಿಲಾಶೆಯ ಮೊಟ್ಟೆ ಇಟ್ಟಿತು, ಚಳಿಯಲಿ ಕಾವು ಕೊಟ್ಟಿತು,
ತನ್ನ ಗರ್ಭದ ತುಣುಕಿಗೆ ತುತ್ತನಿಟ್ಟಿತು...
ಎಲೆಗಳು ಉದುರಿದವು,ಎಲೆಗಳು ಚಿಗುರಿದವು, ಆ ಸಂದರ್ಭವು ಬಂದು ನಿಂತಿತು.
ಸ್ವಚ್ಛಂದದಿ,ಸ್ವಾತಂತ್ರದಿ ಮರಿಯು ಹಾರಿತು.
ಎದೆಯೊಳಗಿನ ಆಸೆಗಳು ಪ್ರಪಂಚದ ಸಾಗರದಲಿ ಕರಗಿ ಹೊದವು.
ಸೃಷ್ಟಿಯ ನಿಯಮದೆದುರು ಎನ್ನ ತಲೆ ಬಾಗುವುದು,
ನೀರ್ ತುಂಬಿದ ಕಣ್ಗಳಲಿ ಮತ್ತದೇ ಬೀಜ ಚಿಗುರೊಡೆಯುವುದು.
No comments:
Post a Comment