ಜನ-ಜಂಗುಳಿ, ಸಾವಿರಾರು ದನಿಗಳು, ಎಲ್ಲಿ ನೋಡಿದರೂ ಚಹರೆಗಳು.
ಆ ಚಹರೆಗಳಲ್ಲಿ ಆಕಾಂಕ್ಷೆ ಹೊತ್ತ ಅಕ್ಷಿಗಳು.
ಅಕ್ಷಿಪಟಲಗಳನ್ನು ಕ್ಷಣಮಾತ್ರಕ್ಕೆ ಮುಚ್ಚಿ, ನಿರಾಳನೆ ಉಸಿರೆಳೆದು,
ಆಗಸಕ್ಕೆ ಮೊಗಮಾಡಿ ಕೈ ಚಾಚಿ ಮುಷ್ಟಿ ಮುಚ್ಚುವಷ್ಟರಲ್ಲಿ,
ತಣ್ಣನೆ ಬೀಸುವ ಪವನ, ಆಗಷ್ಟೇ ಧರೆಗಿಳಿದ ವರ್ಷಧಾರೆಯನ್ನು ತನ್ನ ಜೊತೆ ಕೊಂಡೊಯ್ಯುತ್ತಾನೆ.
ಮುಷ್ಟಿಗಳು ಮುಚ್ಚುತ್ತವೆ, ಕೈಗಳು ತನುವನ್ನು ತಬ್ಬಿಕೊಂಡು ನೊಂದ ಮನಕ್ಕೆ ಜೊತೆಯಾಗುತ್ತವೆ.
ಮಂಜು ಮುಸುಕಿದ ನೆಲವ ನೋಡುತ ಕಣ್ರೆಪ್ಪೆ ತೆರೆದಾಗ,
ತನುವಿನ ಬಿಸಿಯುಸಿರೂ ಚಳಿಗೆ ಕರಗುತ್ತದೆ.
ಅಲ್ಪ ಅನುಭವ, ಸ್ವಲ್ಪ ಸೃಷ್ಟಿ.
~ ಪೃಥ್ವಿ
No comments:
Post a Comment