Thursday, 21 August 2014

ಚಿಂತೆ

ಕಡಲ ಅಲೆಗಳ ಓಡಲ ತಡೆಗಳ
ಎಣಿಸಿ ಪೋಣಿಸಿ ಅಲಂಕರಿಸಿ 
ಇಲ್ಲದ ಲೆಕ್ಕವ ಸಲ್ಲಿಸಲು 
ಅಜ್ಞಾತರಿಗೆ ಆಹ್ವಾನ ನೀಡಿರಲು,
ದೂರದಿಂದ ಕಂಡ ಆನಂದರಾಯನು
ಮೋಡಗಳಲಿ ಚಿತ್ತಾರ ಮೂಡಿಸಿ
ಹೂಗಳ ಮೇಲೆ ಪಾತರಗಿತ್ತಿಯ ಬಿಟ್ಟು
ಸೀಟಿ ಊದುತ್ತ ನಡೆದು ಹೋದ.
"ನಮ್ಮಿಬ್ಬರ ಸ್ವಾತಂತ್ರ ಇಲ್ಲಿದೆ" ಎಂದು ಹೇಳಿದಂತೆ ಬಾಗಿಲ ಕೊಂಡಿಯು ಗಾಳಿಯ ನೆಪದಲ್ಲಿ ಸದ್ದು ಮಾಡತೊಡಗಿತು.