ನೂರಾರು ಕಣ್ಣುಗಳೆ, ಹದಿ ಹರೆಯದ ಹೃದಯಗಳೆ
ವಾಸ್ತವದ ಹಳ್ಳಕ್ಕೆ ಬೀಳುವಿರೇಕೆ?
ತಮ್ಮದೇ ರೆಕ್ಕೆಗೆ ಕೊಡಲಿಯೇಕೆ?
ಭಯದ ನೆರಳಲಿ ಸೂರ್ಯಕಾಂತಿ ಅರಳದು
ನಿಂತ ನೀರು ಸಾಗರವ ಸೇರದು
ಚಿಗುರಿದ ಮೊಳಕೆಯ ಚಿವುಟದಿರಿ
ಕಣ್ಣ ಮುಚ್ಚಿ ಸ್ವತಃ ಕುರುಡರಾಗದಿರಿ
ಭಾವನೆಗಳಿಗೆ ಜೀವವುಂಟು
ಸಾದ್ಯತೆಯ ಅರಿವುಂಟು
ಛಲದಲ್ಲಿ ಶಾಂತಿ ನೆಲೆಸಲಿ
ಕನಸುಗಳು ನನಸಾಗಲಿ
ದೈನಂದಿನ ಹಿಗ್ಗಾಟಕೆ ಕೊನೆ ಇರಲಿ
ನಿಲ್ಲದ ಹೋರಾಟಕೆ ದನಿ ಇರಲಿ
ವಾಸ್ತವದ ಹಳ್ಳಕ್ಕೆ ಬೀಳುವಿರೇಕೆ?
ತಮ್ಮದೇ ರೆಕ್ಕೆಗೆ ಕೊಡಲಿಯೇಕೆ?
ಭಯದ ನೆರಳಲಿ ಸೂರ್ಯಕಾಂತಿ ಅರಳದು
ನಿಂತ ನೀರು ಸಾಗರವ ಸೇರದು
ಚಿಗುರಿದ ಮೊಳಕೆಯ ಚಿವುಟದಿರಿ
ಕಣ್ಣ ಮುಚ್ಚಿ ಸ್ವತಃ ಕುರುಡರಾಗದಿರಿ
ಭಾವನೆಗಳಿಗೆ ಜೀವವುಂಟು
ಸಾದ್ಯತೆಯ ಅರಿವುಂಟು
ಛಲದಲ್ಲಿ ಶಾಂತಿ ನೆಲೆಸಲಿ
ಕನಸುಗಳು ನನಸಾಗಲಿ
ದೈನಂದಿನ ಹಿಗ್ಗಾಟಕೆ ಕೊನೆ ಇರಲಿ
ನಿಲ್ಲದ ಹೋರಾಟಕೆ ದನಿ ಇರಲಿ